Bharata

61

Musica creata da Roopa T S con Suno AI

Bharata
v4

@Roopa T S

Bharata
v4

@Roopa T S

Testi
ನನ್ನ ತಾಯಿ ಭಾರತಿ, ನಾನಿವಳ ಸಾರಥಿ;
ಇವಳ ಸಂಸ್ಕೃತಿ ಸಾರದಿ, ವಿಶ್ವವೆಲ್ಲ ಕೀರುತಿ.
ಸತ್ಯ–ಧರ್ಮ ಸನ್ನಿಧಿ, ಶಾಂತಿಯೇ ಇವಳ ಪ್ರಕೃತಿ;
ಭಾರತಾಂಬೆಯ ಚರಣಕೆ, ನಾ ಮಾಡುವೆ ಆರತಿ.

ನನ್ನ ದೇಶ ಮಂದಿರವು, ಹಸಿರೇ ಇವಳ ಹಂದರವು;
ಕೋಗಿಲೆಗಳ ಗಾನವು, ವೇದಘೋಷ ಮಂತ್ರವು;
ನವಿಲಿನ ನಾಟ್ಯವು, ಘಂಟಾನಾದ ತಾಳವು;
ಗಂಗೆ–ಯಮುನೆ ಧಾರೆಯು, ಪವಿತ್ರ ತೀರ್ಥ ಸಾರವು;
ಇವಳ ಸೇವೆ ಪೂಜೆಯೆಂದು, ನನ್ನ ಬದುಕು ಅರ್ಪಿತವು.

ಸಹ್ಯಾದ್ರಿಯೇ ಬಾಗಿಲು, ಮಾವು–ತೆಂಗು ತೋರಣವು;
ಹಸಿರ ಹೊಲವು ಬಿಡಿಸಿವೆ, ಭತ್ತ–ರಾಗಿ ಚಿತ್ತಾರವು;
ಇವಳ ಒಡಲ ತುಂಬಿವೆ, ವಜ್ರ–ವೈಢೂರ್ಯ ಕಣಜವು;
ಹಿಮಾಲಯವೇ ಮುಕುಟವು, ಸಾಗರವೇ ಪಾದಪೀಠವು;
ನನ್ನ ತಾಯಿ ಭಾರತಿಯು, ನೀಡಿಹಳು ಸುಖ ವೈಭೋಗವು ;
ನಮನಗಳ ಅರ್ಪಿಸುವೆ, ಇವಳೇ ನನ್ನ ದೇವಿಯು.

ಕವಿ ಶ್ರೇಷ್ಠರ ನಾಡಿದು, ಮಹಾಪುರುಷರ ಬೀಡಿದು;
ಧರ್ಮ ಕರ್ಮ ಸಾರಿದ ಸಜ್ನನರ ಸವಿ ಗೂಡಿದು
ಅಮರಜ್ಯೋತಿ ಬೆಳಗಿಸಿದ, ವೀರರ ತವರೂರಿದು
ನನ್ನ ತಾಯಿ ಭಾರತಿ, ನಾನಿವಳ ಸಾರಥಿ;
ರಾಷ್ಟ್ರರಥವ ನಡೆಸುತ, ನಾ ನಾಗಬೇಕು ಹಣೆಯ ವಿಭೂತಿ.
Stile di musica
Patriotic,

Potrebbe piacerti

Playlist correlata

Copertina della canzone Зайка 2
v5

Creato da MrKomSS con Suno AI

Copertina della canzone خخ
v4

Creato da Alireza Na con Suno AI

Copertina della canzone Zis2026
v4

Creato da Marco Cannizzaro con Suno AI

Copertina della canzone Paper Hearts
v4

Creato da Mwelwa Jackson con Suno AI